ಭಾರತ ಕೃಷಿ ಪ್ರಧಾನ ದೇಶ. ಕೃಷಿಯನ್ನು ಭಾರತದಲ್ಲಿ ಪ್ರಾಥಮಿಕ ವಲಯವೆಂದು ಪರಿಗಣಿಸಲಾಗುತ್ತದೆ, ಅಂದರೆ ಕೃಷಿ ಆರ್ಥಿಕತೆಯು ಪ್ರಾಬಲ್ಯಯುತ ವಲಯವಾಗಿದೆ. ಭಾರತದಲ್ಲಿ ದ್ವಿತೀಯ ಮತ್ತು ತೃತೀಯ ಕ್ಷೇತ್ರಗಳು ಶೀಘ್ರ ದರದಲ್ಲಿ ಬೆಳೆಯುತ್ತಿವೆ, ಆದರೂ ಇನ್ನೂ ಬಹುಪಾಲು ಭಾರತೀಯರು ಕೃಷಿಯನ್ನು ಅವಲಂಬಿಸಿದ್ದಾರೆ. ಜನಸಂಖ್ಯೆಯ 70% ಕ್ಕಿಂತಲೂ ಹೆಚ್ಚು ಜನರು ಇನ್ನೂ ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.
ಭಾರತೀಯ ಆರ್ಥಿಕತೆಯ ಬೆಳವಣಿಗೆಗೆ ಸಂಬಂಧಿಸಿದ ಪ್ರತಿಯೊಂದು ಯೋಜನೆಯು ಕೃಷಿ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದೆ. ಏಕೆಂದರೆ ಆರ್ಥಿಕ ಬೆಳವಣಿಗೆಯ ದರಗಳನ್ನು ಸಾಧಿಸಲು, ಮೊದಲು ಆರ್ಥಿಕತೆಯ ಪ್ರಮುಖ ವಲಯದ ಬೆಳವಣಿಗೆಯ ದರವನ್ನು ಸುಧಾರಿಸುವುದು ಮುಖ್ಯವಾಗಿದೆ. ಮೊದಲ ಪಂಚವಾರ್ಷಿಕ ಯೋಜನೆಯಿಂದ ಭಾರತದ ಗಮನವು ಕೃಷಿಯ ಮೇಲೆಯೇ ಇದೆ. ಭಾರತದಲ್ಲಿ ಕೃಷಿ ವಲಯದ ಅಭಿವೃದ್ಧಿಗೆ ಕಾರಣವಾದ ಹಸಿರು ಕ್ರಾಂತಿಗೆ ಧನ್ಯವಾದವನ್ನು ಹೇಳಲೆಬೇಕು. ಭಾರತವು ಈಗ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ, ಭಾರತವು ದೈನಂದಿನ ಬಳಕೆಗಾಗಿ ಆಹಾರ ಧಾನ್ಯಗಳನ್ನು ಸಹ ಆಮದು ಮಾಡಿಕೊಳ್ಳಬೇಕಾದ ದಿನಗಳು ಕಳೆದುಹೋಗಿವೆ. ಭಾರತೀಯ ಕೃಷಿ ತಾಂತ್ರಿಕವಾಗಿ ಪ್ರಗತಿಗೊಳ್ಳುತ್ತಿದೆ. ಭಾರತದಲ್ಲಿನ ಕೃಷಿ ಪ್ರವೃತ್ತಿಗಳಲ್ಲಿ ಒಟ್ಟಾರೆಯಾಗಿ ಸುಧಾರಣೆಯಾಗಿದೆ.
ಮೇಲಿನ ಅಂಶಗಳ ಮೇಲ್ನೋಟದ ವಿಶ್ಲೇಷಣೆಯು ಭಾರತದಲ್ಲಿ ಕೃಷಿ ಕ್ಷೇತ್ರ ಆಶಾದಾಯಕವಾಗಿದೆ ಎಂದು ಹೇಳಲು ಪ್ರೇರೇಪಿಸುತ್ತದೆ. ಆದರೆ ಸತ್ಯವು ಅದರಿಂದ ದೂರವಿದೆ. ಎಲ್ಲಾ ಬೆಳವಣಿಗೆ ಮತ್ತು ಅಭಿವೃದ್ಧಿಯ ಹಿಂದೆ ಭಾರತೀಯ ರೈತರು ಎದುರಿಸಬೇಕಾದ ಸಮಸ್ಯೆಗಳ ವಾಸ್ತವವಿದೆ - ತೀವ್ರ ಬಡತನ ಮತ್ತು ಆರ್ಥಿಕ ಬಿಕ್ಕಟ್ಟು ಅವರನ್ನು ಆತ್ಮಹತ್ಯೆಗೆ ದೂಡುತ್ತಿದೆ.
ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಘೋರ ಪ್ರಕರಣಗಳು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ.
ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಘೋರ ಪ್ರಕರಣಗಳು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ.
ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವ ಸಮಯದಲ್ಲಿ, ರೈತರನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಗಂಭೀರ ಸಮಸ್ಯೆಗಳು ಯಾವುವು? ಎನ್ನುವುದನ್ನು ಗಮನಿಸುವುದಾದರೆ,
- ಆರ್ಥಿಕ ಕಾರಣಗಳು:- ರೈತ ಸಾಂಸ್ಥಿಕ ಮೂಲಗಳಿಂದ ಸಾಲ ಪಡೆಯದೆ, ಲೇವಾದೇವಿಗಾರರು ಹಾಗೂ ಬಡ್ಡಿ ವ್ಯಾಪಾರಿಗಳಿಂದ ಸಾಲವನ್ನು ಹೆಚ್ಚಿನ ಬಡ್ಡಿ ದರದಲ್ಲಿ ತಂದು ಅದನ್ನು ತೀರಿಸಲಾಗದೇ ತಾನೇ ತೀರಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕೃಷಿಯಿಂದ ಬರುವ ಆದಾಯ ಅಲ್ಪವಾಗಿದ್ದು, ಅವನ ಜೀವನ ನಿರ್ವಹಣೆಯ ಖರ್ಚು ಹೆಚ್ಚಾಗಿದೆ. ಇದರಿಂದ ರೈತ ಸಮಸ್ಯೆಗೆ ಸಿಲುಕಿದ್ದಾನೆ.
- ನೈಸರ್ಗಿಕ ಕಾರಣಗಳು:- ಮನುಷ್ಯ ಇಂದು ತನ್ನ ಅಪರಿಮಿತ ಬಯಕೆಗಳನ್ನು ತೀರಿಸಿಕೊಳ್ಳಲು ನಿಸರ್ಗಕ್ಕೆ ಸವಾಲೆಸೆಯುತ್ತಿದ್ದಾನೆ. ಅದಕ್ಕೆ ಪ್ರತಿಕಾರವೆಂಬಂತೆ ಅತಿಯಾದ ಮಳೆ, ಅತಿಯಾದ ಬೇಸಿಗೆ ಬರುವ ಮೂಲಕ ರೈತನ ಬೆಳೆ ಸರ್ವನಾಶವಾಗುತ್ತಿದೆ. ರೈತನ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ರೈತನ ಜೀವನ ಮಳೆಯೊಂದಿಗೆ ಆಡುವ ಜೂಜಾಟವಾಗಿದೆ. ಸೂಕ್ತ ಸಮಯಕ್ಕೆ ಮಳೆ ಬರದೆ ರೈತ ಹಾಕಿದ ಬಂಡವಾಳ ಮಣ್ಣು ಪಾಲಾಗುತ್ತದೆ.
- ಸಾಮಾಜಿಕ ಕಾರಣಗಳು:- ರೈತ ಧಾರ್ಮಿಕ ಆಚರಣೆಗಳನ್ನು, ಅದ್ದೂರಿ ಮದುವೆಗಳನ್ನು, ಹಬ್ಬ ಹರಿದಿನಗಳನ್ನು ಮಾಡಲು ದುಂದುವೆಚ್ಚ ಮಾಡುತ್ತಾನೆ. ಇಲ್ಲಿ ಮಾಡಿದ ವೆಚ್ಚಕ್ಕೆ ಯಾವುದೇ ಪ್ರತಿಫಲ ಇರುವುದಿಲ್ಲ. ಮಾಡಿದ ಸಾಲ ಮರುಪಾವತಿಯಾಗದೇ, ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ.
- ಕೃಷಿ ಮೂಲಸೌಕರ್ಯಗಳ ಕೊರತೆ:- ರೈತ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಲಭ್ಯವಿಲ್ಲದಿರುವಿಕೆ. ದಿನದ 24 ಗಂಟೆ ವಿದ್ಯುತ್ ಅಲಭ್ಯತೆ. ಕಳಪೆ ಬೀಜಗಳು, ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ, ವ್ಯವಸ್ಥಿತ ಸಾರಿಗೆಯ ಕೊರತೆ ಇದರಿಂದಾಗಿ ರೈತನ ಉತ್ಪಾದನೆಯು ಕಡಿಮೆಯಾಗುತ್ತಿದೆ. ಉತ್ಪಾದನೆ ಮಾಡಿದ ಇಳುವರಿಗೆ ಯೋಗ್ಯ ಬೆಲೆ ದೊರಕದೆ ರೈತನ ಜೀವನವೇ ಅಯೋಗ್ಯವಾಗುತ್ತಿದೆ.
- ಇತರೆ ಕಾರಣಗಳು: ರೈತ ಇಂದು ಬೆಳೆಯುತ್ತಿರುವ ಬೆಳೆಗಳು ಬೇಗನೆ ಕೆಟ್ಟು ಹೋಗುವಂತವುಗಳಾಗಿವೆ. ಉದಾ: ಹಣ್ಣು ಮತ್ತು ತರಕಾರಿ, ಫಸಲು ಬಂದು ಕೆಲವೇ ದಿನಗಳಲ್ಲಿ ಮಾರಾಟವಾಗದಿದ್ದರೆ ಅವು ಸಂಪೂರ್ಣ ಕೆಟ್ಟು ಹೋಗುತ್ತವೆ. ವರ್ಷಾನುಗಟ್ಟಲೇ ರೈತ ಮಾಡಿದ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಸಾಲ ಮಾಡಿ ರೈತ ಬೆಳೆ ಬೆಳೆದಿರುತ್ತಾನೆ. ಆದರೆ ಸಾಲ ತೀರಿಸಲಾಗದೆ ಶೂಲಕ್ಕೆ ಏರಬೇಕಾಗುತ್ತದೆ. ರೈತರಲ್ಲಿ ಇರುವ ದುಶ್ಚಟಗಳಾದ ಮಧ್ಯಪಾನ, ಜೂಜು ಹೆಚ್ಚಾಗಿದೆ ಮತ್ತು ಅದರಿಂದ ಬರುವ ರೋಗ ರುಜಿನಗಳಿಂದ ಮುಕ್ತವಾಗಲು ಹಣ ವ್ಯಯಿಸುತ್ತಾನೆ. ಕೃಷಿ ಮೂಲದಿಂದ ಬರುವ ಉತ್ಪಾದನೆಗೆ ರೈತನಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕೃಷಿಕರಿಗೆ ಪರ್ಯಾಯ ಕೆಲಸಗಳು ಕಡಿಮೆಯಾಗಿವೆ. ನಿರುದ್ಯೋಗದಿಂದ ಬಡತನ, ಬಡತನದಿಂದ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ರೈತ ಬರುತ್ತಿದ್ದಾನೆ.
ರೈತರ ಆತ್ಮಹತ್ಯೆ ತಡೆಗೆ ಪರಿಹಾರೋಪಾಯಗಳು:
ರೈತರ ಆತ್ಮಹತ್ಯೆ ತಡೆಯಲು ಇಂದು ತಕ್ಷಣದ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ.ಕೆಲವು ಪರಿಹಾರೋಪಾಯಗಳನ್ನು ನೋಡುವುದಾದರೆ,
- ರೈತರಿಗೆ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಮೂಲಕ ಸುಲಭವಾಗಿ ಸಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿ ಲೇವಾದೇವಿಗಾರರ ಕಿರುಕುಳವನ್ನು ತಪ್ಪಿಸಬೇಕು.
- ರೈತರಿಗೆ ಅಧುನಿಕ ಬೇಸಾಯದ ಕುರಿತು ಮಾಹಿತಿ ನೀಡುವ ಮೂಲಕ ಫಸಲಿನ ಗುಣಮಟ್ಟ ಮತ್ತು ಪ್ರಮಾಣದ ಹೆಚ್ಚಳಕ್ಕೆ ಆದ್ಯತೆ ನೀಡಬೇಕು.
- ರೈತರ ದುಶ್ಚಟಗಳ ನಿರ್ಮೂಲನೆಗಾಗಿ ಸಾಮಾಜಿಕ ಜಾಗೃತಿ ಮೂಡಿಸುವ ಮೂಲಕ ಕುಟುಂಬದ ಪ್ರಗತಿಗೆ ಸಹಕರಿಸಬೇಕು.
- ರೈತರು ಕೃಷಿ ಜೊತೆಗೆ ಇತರ ಉಪ ಕಸುಬುಗಳನ್ನು ಕೈಗೊಳ್ಳಲು ಸರ್ಕಾರ ಸಹಾಯಧನ ಮತ್ತು ಸೂಕ್ತ ತರಬೇತಿ ನೀಡಬೇಕು.
- ಕೃಷಿಗೆ ಪೂರಕ ಮೂಲಸೌಕರ್ಯಗಳಾದ ಗುಣಮಟ್ಟದ ಸಾರಿಗೆ, ಉತ್ತಮ ಮಾರುಕಟ್ಟೆ ವ್ಯವಸ್ಥೆ, ನೀರಾವರಿ ವ್ಯವಸ್ಥೆ, ಗುಣಮಟ್ಟದ ಬೀಜಗಳ ವಿತರಣೆ, ರಸಗೊಬ್ಬರಗಳ ಲಭ್ಯತೆ ಇರುವಂತೆ ಮಾಡಲು ಸರ್ಕಾರ ಕಾರ್ಯಪ್ರವೃತ್ತವಾಗಬೇಕು.
- ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸರ್ಕಾರ ನಿಗದಿಪಡಿಸಬೇಕು ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು.
- ಸರ್ಕಾರ ಜಾರಿಗೆ ತಂದಿರುವ ವಿಮಾ ಯೋಜನೆಗಳ ಕುರಿತು ತಿಳುವಳಿಕೆ ನೀಡಿ ರೈತರಿಂದ ಬೆಳೆ ವಿಮೆ ಮಾಡಿಸಬೇಕು. ಪ್ರಕೃತಿ ವಿಕೋಪಗಳಿಂದ ರೈತರಿಗೆ ನಷ್ಟವಾದಾಗ ವಿಮಾ ಕಂಪನಿಗಳು ರೈತನಿಗೆ ಪರಿಹಾರ ಒದಗಿಸಿಕೊಡುತ್ತವೆ.
ಈ ಮೇಲೆ ತಿಳಿಸಿದ ಎಲ್ಲಾ ಕ್ರಮಗಳ ಸರ್ಕಾರ ಹಾಕಿಕೊಂಡಿದ್ದರೂ ಅವುಗಳ ಪರಿಣಾಕಾರಿ ಜಾರಿಯಲ್ಲಿ ಕೊರತೆ ಕಂಡುಬರುತ್ತಿದೆ. ಯೋಜನೆಗಳು ಅನುಷ್ಠಾನಕ್ಕೆ ಬಂದರೆ ರೈತರ ಆತ್ಮಹತ್ಯೆ ತಡೆಯಲು ಸಾಧ್ಯಾವಾಗಬಹುದು.
ಉಪಸಂಹಾರ:
"ಒಬ್ಬ ಮನುಷ್ಯನಿಗೆ ಒಂದು ಮೀನು ಕೊಡಿ, ಅವನು ಒಂದು ದಿನ ತಿನ್ನುತ್ತಾನೆ, ಆದರೆ ಅದೇ ಮೀನು ಹಿಡಿಯುವುದು ಹೇಗೆ ಎಂದು ಕಲಿಸಿದರೆ, ಅವನು ತನ್ನ ಜೀವನದುದ್ದಕ್ಕೂ ತಿಂದು ಬದುಕುತ್ತಾನೆ" ಎಂಬ ಜನಪ್ರಿಯ ಮಾತಿನಂತೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಸಾಲಮನ್ನಾ ಎಂಬ ಕಣ್ಣೊರೆಸುವ ತಂತ್ರವನ್ನು ಬಿಟ್ಟು ರೈತನ ಸಂಕಷ್ಟವನ್ನು ಅರಿತು ಅವನು ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಿದಾಗ ಮಾತ್ರ “ಜೈ ಜವಾನ್ ಜೈ ಕಿಸಾನ್” ಘೋಷಣೆಗೆ ಅರ್ಥ ಬಂದತ್ತಾಗುತ್ತದೆ.
Click here to Download pdf file
Click here to Download pdf file
Perfect
ReplyDeleteSuper
ReplyDelete👌
ReplyDeleteYour eassy is very fantastic
ReplyDeleteSuper 👍
ReplyDeleteSuper
ReplyDeleteSuper
ReplyDeleteSuper
ReplyDelete